ಉಂಡು ನೂರಡಿಯಿಟ್ಟು ಇಟ್ಟು ಎಂದು ಸರ್ವಜ್ಞನ ವಚನದಲ್ಲಿ ನಾವೆಲ್ಲರೂ ಕೇಳಿರುತ್ತೇವೆ.

ಇದು ಯಾಕೆ ನಾವು ಪಾಲಿಸಬೇಕು ಎಂದರೆ:

  • ಪಚನ ಕ್ರಿಯೆಗೆ ಬೇಕಾಗಿರುವುದು ಮೂರರಿಂದ ನಾಲ್ಕು ಗಂಟೆಗಳು.
  • ಊಟವಾದ ತಕ್ಷಣ ಮಲಗಿದರೆ, ನಮ್ಮ ಹೊಟ್ಟೆ, ವಾಲಿಕೊಳ್ಳುತ್ತದೆ.
  • ಇದರಿಂದ ಊಟ ಪಚನ ವಾಗಲು ಒಂದು ಟ್ರ್ಯಾಕ್ ಮೂಲಕ ಹೋಗಬೇಕಾಗುತ್ತದೆ.
  • ಊಟದ ಚಲನ ನಿಧಾನವಾದಾಗ, ಬೈಲ್ ಜ್ಯೂಸ್ ನಮ್ಮ ಹೊಟ್ಟೆಯಲ್ಲಿ ಗ್ಯಾಸ್ ಉತ್ಪತ್ತಿ ಮಾಡುತ್ತದೆ.
  • ಗ್ಯಾಸ್ ಉತ್ಪತ್ತಿಯಾದಾಗ, ಹುಳಿತೇಗು ಹಾಗೂ ಎದೆ ಉರಿ, ಹೊಟ್ಟೆ ನೋವುಗಳು ಬರುವುದು ಸಾಮಾನ್ಯ.

ಆದ್ದರಿಂದ ನಾವು ಊಟವಾದ ಒಂದು ಎರಡು ಗಂಟೆಗಳ ನಂತರ ಮಲಗಿಕೊಳ್ಳುವುದು, ಗ್ಯಾಸ್ ಉತ್ಪತ್ತಿಯಾಗದಂತೆ ತಡೆಯುತ್ತದೆ.

ನಾವು ಊಟವಾದ ಮೇಲೆ ಅರ್ಧ ಗಂಟೆ ನಡೆದರೆ, ಊಟ ತನ್ನ ಟ್ರ್ಯಾಕ್ ನಲ್ಲಿ ವೇಗದಿಂದ ಚಲಿಸಲು ಸಹಾಯವಾಗುತ್ತದೆ.

ಇದರಿಂದ ಪಚನ ಕ್ರಿಯೆಗೆ ಹೆಚ್ಚಿನ ಕುಮ್ಮಕ್ಕು ನೀಡಿದಂತೆ ಆಗುತ್ತದೆ.

ಇದರಿಂದ ಪಚನ ಕ್ರಿಯೆ ಆರಾಮವಾಗಿ ನಿಮಗೆ ಯಾವುದೇ ತೊಂದರೆ ಇಲ್ಲದೆ, ನಿದ್ದೆ ಬರಲು ಸಹಾಯವಾಗುತ್ತದೆ.

ಸಾಮಾನ್ಯವಾಗಿ, ಮಕ್ಕಳು ಊಟವಾದ ತಕ್ಷಣ ಮಲಗಿ ಬಿಡುತ್ತಾರೆ.

ಮಲಗಿ ಒಂದು ಎರಡು ಗಂಟೆಗೆ ಅವರಿಗೆ ಕೆಮ್ಮು ಹಾಗೂ ವಾಂತಿ ಆಗಲು ಶುರುವಾಗುತ್ತದೆ.

ಇದು ಏಕೆಂದರೆ ನಾವು ಎದ್ದಿದ್ದಾಗ ಊಟ ಪಚನದ ಕ್ರಿಯೆಯನ್ನು ನಡೆಸುವುದು, ಮೇಲಿನಿಂದ ಕೆಳಗೆ ಹೋಗುವುದು, ಸಲೀಸಾಗಿ ಆಗುತ್ತದೆ.

ನಾವು ಮಲಗಿದಾಗ, ಊಟ ತನ್ನ ಟ್ರ್ಯಾಕ್ ನಲ್ಲಿ ಚಲಿಸಲು ತೊಂದರೆಯಾಗುವುದರಿಂದ, ಗ್ಯಾಸ್ ಉತ್ಪತ್ತಿಯಾಗಿ, ಮಕ್ಕಳಿಗೆ ವಾಂತಿ ಬರುತ್ತದೆ.

ಆದ್ದರಿಂದ ಮಕ್ಕಳಿಗೂ ಊಟವಾಗಿ ಅರ್ಧ ಗಂಟೆಯಾದರೂ ಮಲಗಲು ಬಿಡಬೇಡಿ.

ಉತ್ತಮವೆಂದರೆ ಊಟವಾದ ಎರಡು ಗಂಟೆ ನಂತರ ಮಲಗುವುದು.

ಇದರಿಂದ ನಿಮ್ಮ ಜೀವನ ಹಾಗೂ ನಿಮ್ಮ ಹೊಟ್ಟೆ, ಬಹಳ ಸಂತೋಷದಿಂದಿರುತ್ತದೆ.

Leave a Reply

Your email address will not be published. Required fields are marked *